Thursday 19 January 2012

ಮುಂಜಾನೆ,ಸಂಗೀತದ

ಮುಂಜಾನೆ,ಸಂಗೀತದ ಎಸ್.ನಾರಾಯಣ್
 Munjaane Songs  Free Download Mp3http://www.123musiq.com/DS/123New.gif
     

ನಾವು ಹಿಂಗೇನೆ ನೀವು ಹಂಗೇನೆ 


ಗಾಯನ: ಜೆಸ್ಸಿ ಗಿಫ್ಟ್, ಆಸ್ಕರ್

ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ
ತರ್ಲೆ ತಂಟೆ ಮಾಡುತೀವಿ ಹಿಂಗೇನೆ
ಕೋಪಮಾಡ್ಕೊಂಡ್ ಹೊಗ್ತೀರ್ ನೀವು ಹಂಗೇನೆ
ಕಾಟ ತುಂಬ ಕೊಡ್ತಿರ್ತೀವಿ ಹಿಂಗೇನೆ
ಬೈಕೊಂಡು ಶಾಪ ಹಾಕ್ತೀರಿ ನೀವು ಹಂಗೇನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ವಯಸ್ಸು ಹಿಂಗೇನೆ

ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ

ಹುಡ್ಗೀರ್ನ ನೋಡ್ದೆ ಇದ್ರೆ ನೆಮ್ದಿ ಇರಲ್ಲ, ನಾವು ಚುಡಾಯ್ಸದೆಹೊದ್ರೆ ಅವರ್ಗೆ ತೃಪ್ತಿ ಆಗಲ್ಲ
ಹುಡ್ಗೀರ್ನ ನೋಡ್ದೆ ಇದ್ರೆ ನೆಮ್ದಿ ಇರಲ್ಲ, ನಾವು ಚುಡಾಯ್ಸದೆಹೊದ್ರೆ ಅವರ್ಗೆ ತೃಪ್ತಿ ಆಗಲ್ಲ
ನಾವ್ಹಾಕೊ ಬಟ್ಟೆ ಅವರು ಹಾಕ್ಕೊತಾರಲ್ಲ
ನಮ್ಗಾಗಿ ಸ್ಟೈಲು ಮಾಡ್ಕೊಂಡು ಒಡಾಡ್ತಾರಲ್ಲ
ಹುಡ್ಗೀ‍ರ್ನ ನಾವು ನೊಡದಿದ್ರೆ, ಸೈಟು ಗಿಯ್‌ಟು ಹಾಕದಿದ್ರೆ
ತುಂಬಾ ಬೇಜಾರ್ ಮಾಡ್ಕೋತಾರೆ, ಲೈಫೆ ವೇಷ್ಟು ಅನ್ಕೋತಾರೆ
ಹೆಣ್ಣಾಗಿ ಹುಟ್ಟಿದ್ದೆ ವೇಷ್ಟು ಅಂತಾರೆ, ತುಂಬ ಅಪ್ಸೆಟ್ಟಾಗ್ತಾರೆ

ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ

ಹೇತ್ತೋರ್ಗೆ ಒಳ್ಳೆವ್ರಾಗಿ ಇರಕ್ಕಾಗಲ್ಲ, ನಾವು ಸುತ್ತಾಡ್ಕೊಂಡುಬಂದ್ರೆ ಅವರ್ಗೆ ಇಷ್ಟಆಗಲ್ಲ
ಹೇತ್ತೋರ್ಗೆ ಒಳ್ಳೆವ್ರಾಗಿ ಇರಕ್ಕಾಗಲ್ಲ, ನಾವು ಸುತ್ತಾಡ್ಕೊಂಡುಬಂದ್ರೆ ಅವರ್ಗೆ ಇಷ್ಟಆಗಲ್ಲ
ಅವ್ರಾಡೊ ಮಾತು ನಮ್ಗೆ ತಲೆಗ್ ಹತ್ತಲ್ಲ
ನಾವಾಡೊ ಆಟ ಅವರ್ಗೆ ಸಹಿಸೊಕ್ಕಾಗಲ್ಲ
ಫ್ರೆಂಡ್ಸು <> ಸೇರಿಕೊಂಡು, ಮೋಜು ಮಜ ಮಾಡಿಕೊಂಡು 
ಚಿಲ್ರೆ ಕಾಸು ಕೂಡಿಸ್ಕೋಡು, ಪಿಜ್ಜ ಬರ್ಗರ್ ತಿಂದುಕೊಂಡು
ಎಂಜಾಯ್ ಮಾಡದಿದ್ರೆ ನಿದ್ರೆ ಬರೊಲ್ಲ, ತಿಂದಿದ್ ಜೀರ್ಣ ಆಗಲ್ಲ

ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ
ತರ್ಲೆ ತಂಟೆ ಮಾಡುತೀವಿ ಹಿಂಗೇನೆ
ಕೋಪಮಾಡ್ಕೊಂಡ್ ಹೊಗ್ತೀರ್ ನೀವು ಹಂಗೇನೆ
ಕಾಟ ತುಂಬ ಕೊಡ್ತಿರ್ತೀವಿ ಹಿಂಗೇನೆ
ಬೈಕೊಂಡು ಶಾಪ ಹಾಕ್ತೀರಿ ನೀವು ಹಂಗೇನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ವಯಸ್ಸು ಹಿಂಗೇನೆ
ವಯಸ್ಸು ಹಿಂಗೇನೆ


ಚಿತ್ರ: ಮುಂಜಾನೆ (೨೦೧೨)
ಸಾಹಿತ್ಯ: ಎಸ್.ನಾರಾಯಣ್
ಸಂಗೀತ: ಎಸ್.ನಾರಾಯಣ್
ಯಾರೋ ಒಬ್ ಸುಂದರಿ 
ಗಾಯನ: ಇಷಾನ್ ದೇವ್


ಯಾರೋ ಒಬ್ ಸುಂದರಿ
ಯಂಗವ್‌ಳೊ ಗೊತ್ತಿಲ್‌ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್‌ರಿ
ಓದ್‌ತಿದ್ರೆ ಮುಗಿಯಲ್ಲ 
ನೊಡ್‌ತಿದ್ರು ಸಾಲಲ್ಲ
ಅನುಬವಿಸ್‌ತ್ತಿದ್ರೆ ಎಂಥಾ ಆನಂದವು
ನನ್ನಲ್ಲಿ ಎನಾದೀತೋ ನಂಗೆ ಗೊತ್ತಿಲ್ಲಾ 
ಯಾವತ್ತು ನಾನಿಂಗೆಲ್ಲ ಆಡ್‌ದೊನೆಅಲ್ಲ 
ಮನಸಲ್ಲಿ ತುಂಬೋಗೈತದೇನೋ ಗೊತ್ತಿಲ್ಲ

ಯಾರೋ ಒಬ್ ಸುಂದರಿ
ಯಂಗವ್‌ಳೊ ಗೊತ್ತಿಲ್‌ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್‌ರಿ

ಪ್ರೀತಿಗೆ ಸಿಗ್ನಲ್ ಕೊಟ್ಳು 
ಹೃದಯಾನ ತೆರೆದಿಟ್‌ಬಿಟ್ಳು 
ಹೋಗೋಕೆ ನಂಗೆ ನಾಚಿಕೆಯು 
ಮನಸ್ಸಿಗೆ ಮೆಸೇಜ್ ಕೊಟ್ಳು
ವಯಸ್ಸಿಗೆ ವಾರಂಟ್ ಕೊಟ್ಳು
ಹೇಳೋಕೆ ನಂಗೆ ಸಂಕೋಚವು
ಒಪ್‌ಕೊಂಡ್‌ಬಿಡ್ಲಾ ತಬ್‌ಕೊಂಡ್‌ಬಿಡ್ಲಾ
ಒಂದು ಸಾರಿ ಹೂಂ ಅಂದ್ ಬಿಡ್ಲಾ
ನನ್ನಲ್ಲಿ ನಾನೇ ಇಲ್ಲ ಎಲ್‌ಹೊದ್‌ಲೊ ಗೊತ್ತೇ ಇಲ್ಲ
ಹುಡುಕೋದು ಎಲ್ಲಿ ಅಂತ ಹೊಳಿತಾನೆ ಇಲ್ಲ

ಯಾರೋ ಒಬ್ ಸುಂದರಿ
ಯಂಗವ್‌ಳೊ ಗೊತ್ತಿಲ್‌ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್‌ರಿ
ಓದ್‌ತಿದ್ರೆ ಮುಗಿಯಲ್ಲ 
ನೊಡ್‌ತಿದ್ರು ಸಾಲಲ್ಲ
ಅನುಬವಿಸ್‌ತ್ತಿದ್ರೆ ಎಂಥಾ ಆನಂದವು

ಮನಸ್ಯಾಕೋ ಕಾಡ್‌ತೈತಲ್ಲ
ನನ್‌ಮಾತು ಕೇಳ್‌ತಾಇಲ್ಲ 
ನನ್ನನ್ನು ಎಲ್ಲಿಗೊ ನೂಕುತಿದೆ
ಯಾವತ್ತು ಹಿಂಗಾಗ್‌ಲಿಲ್ಲ
ನಂಗೇನು ಗೊತ್ತಿರ್-ಲಿಲ್ಲಾ
ಪ್ರೀತಿಯ ಪರಿಚಯ ಮಾಡುತಿದೆ
ಪ್ರೇಮಿಗಳ ಸಂಘದಲಿ ನಾನೂ ಒಬ್ಬ ಸದಸ್ಯನೇ
ಲೈಫ್ ಮೆಂಬರ್ ಆಗೇ ಬಿಡ್‌ಲಾ
ಲೈಫ್‌ಅಲ್ಲಿ ಸೇರ್-ಕೊಂಡ್‌ ಬಿಡ್ಲಾ
ಚೆಲುವೆಯೆ ನಿಂಗೆ ಸಂದೇಶವಿದು

ಯಾರೋ ಒಬ್ ಸುಂದರಿ
ಯಂಗವ್‌ಳೊ ಗೊತ್ತಿಲ್‌ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್‌ರಿ

ಹೇ ಮನಸೇ ಹೇ ಹೇ ಮನಸೇ 
ಗಾಯನ: ಆಕಾಶ್ ತಳಪತ್ರ, ಶ್ರೇಯಾ ಘೋಷಾಲ್


ಹೇ ಮನಸೇ ಹೇ ಹೇ ಮನಸೇ
ನೀ ನಲಿವ ಮುಂಜಾನೆ ಇದು
ಹೇ ಮನಸೇ ಹೇ ಹೇ ಮನಸೇ
ನೀ ನಲಿವ ಮುಂಜಾನೆ ಇದು

ಮೂಡಣಕೆ ಹಾಲ್ಗಡಲ ಚುಂಬಿಸುವ ಮುಂಜಾನೆ ಇದು
ಆಸೆಗಳ ಗರಿಗೆದರಿ ನಲಿನಲಿವ ಮುಂಜಾನೆ ಇದು

ಹೇ ಮನಸೇ ಹೇ ಹೇ ಮನಸೇ
ನೀ ನಲಿವ ಮುಂಜಾನೆ ಇದು

ಹಕ್ಕಿಗಳ ಕೂಟದಲಿ ಜಿಗಿ ಜಿಗಿ ಜಿಗಿದೆನು ಹೋ...
ಚಿಲಿಪಿಲಿಯ ಸಿಂಚನದಿ ಗುನು ಗುನು ಗುನುಗಿದೆ ಹೋ...
ಯಾರೋ ಯಾರೋ ಕರೆಯೆ ನನ್ನ
ದೂರ ಬಹುದೂರ ಸೆಳೆಯೆ ನನ್ನ
ಮನಸ್ಸಿನ ಮಂಥನ ಹೋ...

ಸಾಗರದ ಅಲೆಗಳಲಿ ನಲಿ ನಲಿ ನಲಿದೆನು ಹೋ...
ಚಂದ್ರಮನ ಸಂಭ್ರಮದಿ ಕುಣಿ ಕುಣಿ ಕುಣಿದೆನು ಹೋ...
ನಾನೆ ನಾನೆ ರಾಜ ಈಗ
ಬಾರೇ ಬಾರೇ ಒಲವೇ ನೀ ಬಾರೇ
ಹೃದಯದ <>

ಹೇ ಮನಸೇ ಹೇ ಹೇ ಮನಸೇ
ನೀ ನಲಿವ ಮುಂಜಾನೆ ಇದು
ಹೇ ಮನಸೇ ಹೇ ಹೇ ಮನಸೇ
ನೀ ನಲಿವ ಮುಂಜಾನೆ ಇದು

ಮೂಡಣಕೆ ಹಾಲ್ಗಡಲ ಚುಂಬಿಸುವ ಮುಂಜಾನೆ ಇದು
ಆಸೆಗಳ ಗರಿಗೆದರಿ ನಲಿನಲಿವ ಮುಂಜಾನೆ ಇದು

ಮುಂಜಾನೆ ಇದು

ಅಂತೂ ಇಂತೂ ಇವಳಿಗೆ ನಾನು ಸ್ವಂತ 
ಗಾಯನ: ಶಾನ್, ಶ್ವೇತಾ ಪಂಡಿತ್, ಶಕ್ತಿಶ್ರೀ


ಅಂತೂ ಇಂತೂ ಇವಳಿಗೆ ನಾನು ಸ್ವಂತ
ಮನಸ್ಸು ಅಂತು ಇವಳೇ ನಿನ್ನವಳಂತ
ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸ್ಸು ಅಂತು ಇವನೇ ನಿನ್ನವನಂತ
ಆಡದೆ ಉಳಿದ ಮಾತು ಹರಿದು ಬಂತು ಈಗ
ಕೂಡಿದ ಮೇಲಿನ್ನೇನು ಪ್ರೀತೀ...
ಇವಳಿಗೆ ನಾನು ಸ್ವಂತ
ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸ್ಸು ಅಂತು ಇವಳೇ ನಿನ್ನವಳಂತ

ಸಜನೀ ಸಜನೀ
ಸಜನ ಹೊ ಸಜನ
ಪಟ ಪಟ ಬಡಿಯುವ ಹೃದಯದಲಿ ಸಪ್ಪಳ ನಾನಂತೆ
ಹಗಲಿರುಳೆನ್ನದೆ ಚಲಿಸುವ ನಿನ್ನ ಉಸಿರೆ ನಾನಂತೆ
ಇದ್ದರೆ ನಿನ್ನಯ ಪ್ರೀತಿ ಅಲ್ಲಿ
ಸೌಕ್ಯವೆ ಅನುದಿನ ಬಾಳಿನಲ್ಲಿ
ಶಿಲ್ಪವೊ ಕಾವ್ಯವೊ ಕೂಡಿದ
ಇವಳಿಗೆ ನಾನು ಸ್ವಂತ
ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸ್ಸು ಅಂತು ಇವಳೇ ನಿನ್ನವಳಂತ

ಹೂವೇ ಓ ಹೂವೇ 
ಹೂವೇ ಹೂವೇ 
ಅಕ್ಕರೆ ಗೆಳೆಯನ ನಗುವಿನಲಿ
ಸಿಡಿದಿದೆ ಕನಸುಗಳು
ಬೊಗಸೆಯ ಕಂಗಳ ಕೊಳದಲ್ಲಿ
ಬಿಸಿಬಿಸಿ ಬಯಕೆಗಳು
ಇದ್ದರೆ ನಿನ್ನಯ ಸಂಗದಲ್ಲಿ 
ಮರೆಯದ ಅನುಭವ ಬಾಳಿನಲ್ಲಿ
ಮೆಚ್ಚುವ ಇಚ್ಚೆಯ ಕಲ್ಪಿಸೊ
ಇವನಿಗೆ ನಾನು

ಅಂತೂ ಇಂತೂ ಇವಳಿಗೆ ನಾನು ಸ್ವಂತ
ಮನಸ್ಸು ಅಂತು ಇವಳೇ ನಿನ್ನವಳಂತ

   ಎಲ್ಲೆ ನೀನೆಲ್ಲೆ 
ಗಾಯನ: ವಿಜಯ್ ಪ್ರಕಾಶ್, ಅನುರಾಧ ಭಟ್


ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ ದಯಮಾಡಿ ಬಂದು ಬಿಡು
ಜೀವಾನು ನಿಂದೆ ಈ ಜನ್ಮಾನು ನಿಂದೆ ಒಮ್ಮೆ ನೀ ಸುಳಿದು ಬಿಡು
ಎಲ್ಲೆ ಎಲ್ಲೆ ಎಲ್ಲೆ ನಲ್ಲೆ ನಲ್ಲೆ ನಲ್ಲೆ

ಹೃದಯದಲಿ ನಾನಿರುವೆ ತಿಳಿಯದೆ ಓ ಗೆಳೆಯ
ನಿನ್ನುಸಿರಿನಲೆ ಬೆರೆತಿರುವೆ ಮರೆತೆಯ ನನ್ನಿನಿಯ
ಎಲ್ಲೆ ಎಲ್ಲೆ ನಲ್ಲೆ ನಲ್ಲೆ 

ಕಲ್ಪನೆಗೆ ಸಿಕ್ಕಿಬಿಡು ಕನಸಲ್ಲಾದ್ರು ಬಂದುಬಿಡು
ಕಾಡಬೇಡ ಸಾಕುಬಾರೆ
ನೀನಾಡೋ ಮಾತಿನಲ್ಲಿ ನಾನಿರುವೆನು
ಕೊಲ್ಲಬೇಡ ನನ್ನವಳೇ 
ಈ ನಿನ್ನ ಬೇಸರದಿ ನಾನಿರುವೆನು
ಎಲ್ಲೆ ಎಲ್ಲೆ ನಲ್ಲೆ ನಲ್ಲೆ 

ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ ದಯಮಾಡಿ ಬಂದು ಬಿಡು
ಜೀವಾನು ನಿಂದೆ ಈ ಜನ್ಮಾನು ನಿಂದೆ ಒಮ್ಮೆ ನೀ ಸುಳಿದು ಬಿಡು
ಎಲ್ಲೆ ಎಲ್ಲೆ ಎಲ್ಲೆ ನಲ್ಲೆ ನಲ್ಲೆ ನಲ್ಲೆ

ಹುಚ್ಚುಮನಸ್ಸು ಹುಡುಕಿನಿನ್ನ ಎತ್ತೆತ್ತಲು ಸುತ್ತುತ್ತಿದೆ
ಹಂಬಲಿಸಿ ಬೇಡುತಿದೆ
ನೀ ಹುಡುಕೊ ಕಣ್ಣಿನಲ್ಲೂ ನಾನಿರುವೆನು
ಗೋಚರಿಸು ಸ್ವೀಕರಿಸು 
ನಿನ್ನ ಕಣ ಕಣದಲ್ಲೂ ಬೆರೆತಿರುವೆ ನಾ
ಎಲ್ಲೆ ಎಲ್ಲೆ ನಲ್ಲೆ ನಲ್ಲೆ 

ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ ದಯಮಾಡಿ ಬಂದು ಬಿಡು
ಜೀವಾನು ನಿಂದೆ ಈ ಜನ್ಮಾನು ನಿಂದೆ ಒಮ್ಮೆ ನೀ ಸುಳಿದು ಬಿಡು
ಎಲ್ಲೆ ಎಲ್ಲೆ ಎಲ್ಲೆ ನಲ್ಲೆ ನಲ್ಲೆ ನಲ್ಲೆ
ಎಲ್ಲೆ ಎಲ್ಲೆ ಎಲ್ಲೆ ನಲ್ಲೆ...

ಹೇ ಹೂವೇ ಹೇ ಹೇ ಹೂವೇ 
ಗಾಯನ: ಶ್ರೇಯಾ ಘೋಷಾಲ್, ರವೀಂದ್ರ ಸೊರಗಾವಿ


ಹೇ ಹೂವೇ ಹೇ ಹೇ ಹೂವೇ
ನೀ ಅರಳೊ ಮುಂಜಾನೆ ಇದು
ಹೇ ಹೂವೇ ಹೇ ಹೇ ಹೂವೇ
ನೀ ನಲಿವ ಮುಂಜಾನೆ ಇದು

ಆಸೆಗಳೆ ಆಸೆಗಳೆ 
ನೀ ಅರಳೊ ಮುಂಜಾನೆ ಇದು
ಕನಸುಗಳೆ ಹೊಂಗನಸುಗಳೆ
ಚಿಗುರೊಡೆವ ಮುಂಜಾನೆ ಇದು

ಹೇ ಹೂವೆ ಚಿನ್ನಾ ಹೂವೆ
ನಾ ನಲಿವ ಮುಂಜಾನೆ ಇದು

ಮೇಘಗಳ ಕೂಟದಲಿ ಕುಣಿ ಕುಣಿ ಕುಣಿದೆನು ಹೋ...
ನೀರ್ಜರಿಯ ನರ್ತನದಿ ದುಮ ದುಮ ದುಮುಕಿದೆ ಹೋ...
ಯಾಕೊ ಯಾಕೊ ಯಾಕೊ ತಿಳಿಯೆ
ಯಾರೊ ಯಾರೊ ನನ್ನಲಿ ಸುಳಿಯೆ
ಮನಸಿನ ಮಂಥನ ಹೋ...

ಬಣ್ಣಗಳ ಕೂಟದಲಿ ನಲಿ ನಲಿ ನಲಿದೆನು ಹೋ...
ಗಾಳಿಯಲಿ ತೇಲುತಲಿ ಜಿನು ಜಿನು ಜಿನುಗಿದೆ ಹೋ...
ನಾನೆ ನಾನೆ ರಾಣಿ ನಾನೆ
ಲೋಕ ಈ ಲೋಕ ಎಲ್ಲ ನನದೆ
ಪ್ರೀತಿಯ ಸಿಂಚನ ಹೋ...

ಹೇ ಹೂವೇ ಹೇ ಹೇ ಹೂವೇ
ನೀ ಅರಳೊ ಮುಂಜಾನೆ ಇದು
ಹೇ ಹೂವೇ ಹೇ ಹೇ ಹೂವೇ
ನೀ ನಲಿವ ಮುಂಜಾನೆ ಇದು

ಆಸೆಗಳೆ ಆಸೆಗಳೆ 
ನೀ ಅರಳೊ ಮುಂಜಾನೆ ಇದು
ಕನಸುಗಳೆ ಹೊಂಗನಸುಗಳೆ
ಚಿಗುರೊಡೆವ ಮುಂಜಾನೆ ಇದು

ಮುಂಜಾನೆ ಇದು

ಸಿಡಿ ಬೆಲೆ ಕೇವಲ ರು.50/-


No comments:

Post a Comment