Tuesday 11 October 2011

ಜೆಸ್ಸಿ ಗಿಫ್ಟ್ ಸಂಗೀತದ ಶೈಲೂ

ಜೆಸ್ಸಿ ಗಿಫ್ಟ್ ಸಂಗೀತದ ಶೈಲೂ ಧ್ವನಿಸುರುಳಿ ವಿಮರ್ಶೆ

ಯಶಸ್ಸಿನ ಗಾಳಿಪಟದ ನಿರೀಕ್ಷೆಯಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಚಿತ್ರ ಶೈಲೂ. ಜೆಸ್ಸಿ ಗಿಫ್ಟ್ ಸಂಗೀತ ನೀಡಿರುವ ಈ ಚಿತ್ರದ ನಿರ್ಮಾಪಕರು ಕೊಬ್ಬರಿ ಮಂಜು. ಇದು ತಮಿಳಿನ 'ಮೈನಾ' ಚಿತ್ರದ ರಿಮೇಕ್.

1. ಪದ ಪದ ಕನ್ನಡ ಪದನೇ
ಸಾಹಿತ್ಯ: ಎಸ್ ನಾರಾಯಣ್
ಹಾಡಿರುವವರು: ಪುನೀತ್ ರಾಜಕುಮಾರ್

ಕನ್ನಡದ ಸಂಸ್ಕೃತಿ ಬಗ್ಗೆ ಉತ್ತಮ ಸಾಹಿತ್ಯವಿರುವ ಮೆಲೋಡಿಯಸ್ ಹಾಡು. ಹಾಡಿಗೆ ಫಾಸ್ಟ್ ಬಿಟ್ ಜೊತೆ ಇಂಪಾದ ಟ್ಯೂನ್ ನೀಡಿದ್ದಾರೆ ಸಂಗೀತ ನಿರ್ದೇಶಕರು. ಪುನೀತ್ ಈ ಹಾಡನ್ನು ಹಾಡಿರುವುದು ವಿಶೇಷ.

2. ಓ ಜೀವವೇ.. ನನ್ ಜೀವವೇ
ಸಾಹಿತ್ಯ: ಕವಿರಾಜ್
ಹಾಡಿರುವವರು: ಶಾನ್, ಶ್ರೇಯಾ ಘೋಷಾಲ್

ಸ್ಲೋ ಪಿಚ್‌ನಲ್ಲಿ ಸಾಗುವ ಈ ಹಾಡನ್ನು ಈ ಹಿಂದೆ ಎಲ್ಲೋ ಕೇಳಿದ‍ ಹಾಗೆ ಅನಿಸುತ್ತದೆ. ಹಾಡಿನ ಸಾಹಿತ್ಯ ಚೆನ್ನಾಗಿದ್ದು, ಸ್ವರ ಉಚ್ಚಾರಣೆಯಲ್ಲಿ ಶಾನ್ ಆಗಲಿ ಶ್ರೇಯಾ ಎಡವಿಲ್ಲ. ಹಾಡಿನ ಟ್ಯೂನ್ ಮತ್ತು ಲೈಟ್ ಮ್ಯೂಸಿಕ್ ಪಸಂದಾಗಿದೆ.

3. ಶೈಲೂ ಅರೆ ನನಗೆನಾಯಿತು ಹೇಳು..
ಸಾಹಿತ್ಯ: ಕವಿರಾಜ್
ಹಾಡಿರುವವರು: ಇಷಾನ್ ದೇವ್

ಹಾಡಿನ ಮೊದಲ ಟ್ಯೂನ್ ಮಣಿರತ್ನಂ ನಿರ್ದೇಶನದ ಬಾಂಬೆ ಚಿತ್ರದ ಹಾಡನ್ನು ಹೋಲುತ್ತದೆ. ಇಶಾನ್ ದೇವ್ ಕನ್ನಡಕ್ಕೆ ಹೊಸ ಪರಿಚಯ. ಯಾವುದೇ ಉಚ್ಚಾರ ತಪ್ಪಿಲ್ಲದೆ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡಿನ ಸಾಹಿತ್ಯ ಮತ್ತು ಟ್ಯೂನ್ ಇಂಪಾಗಿದೆ.

4. ಈ ಮನಸಿನಲಿ...ಕನಸುಗಳ
ಸಾಹಿತ್ಯ: ನಾಗೇಂದ್ರ ಪ್ರಸಾದ್
ಹಾಡಿರುವವರು: ಜೆಸ್ಸಿ ಗಿಫ್ಟ್, ಚೈತ್ರಾ

ವೆಸ್ಟರ್ನ್ ಶೈಲಿಯಲ್ಲಿ ಬಂದಿರುವ ಹಾಡು. ಹಾಡಿನ ಸಾಹಿತ್ಯ ಏನೋ ಚೆನ್ನಾಗಿದೆ, ಆದರೆ ಟ್ಯೂನ್ ಅಷ್ಟಕಷ್ಟೇ. ಜೆಸ್ಸಿ ಗಿಫ್ಟ್ ಅವರ ವಾಯ್ಸ್ ಇಂತಹ ಟ್ಯೂನ್‌ಗೆ ಸರಿಯಾಗಿ ಹೊಂದಾಣಿಕೆಯಾಗಿಲ್ಲ.

5. ಬಂದಿದ್ದು ಬರಲಿಲ್ಲೊಂದು ನೀ ಗೆಲ್ಲುವೆ
ಸಾಹಿತ್ಯ: ಕವಿರಾಜ್
ಹಾಡಿರುವವರು: ವಿಜಯ್ ಪ್ರಕಾಶ್

ಮತ್ತೊಂದು ಫಾಸ್ಟ್ ಬೀಟ್ ಟ್ರ್ಯಾಕ್ ನಲ್ಲಿರುವ ಹಾಡು. ಹಾಡಿನ ಸಾಹಿತ್ಯ ಚೆನ್ನಾಗಿದ್ದು, ಧಾಟಿ ಚೆನ್ನಾಗಿದೆ. ಒಟ್ಟಿನಲ್ಲಿ ಆಲ್ಬಮ್‌ನ ಮೂರು ಹಾಡುಗಳು ಚೆನ್ನಾಗಿದ್ದು, ಒಂದು ಹಾಡು ‍ಆವರೇಜ್, ಇನ್ನೊಂದು ಹಾಡು ಬಿಲೋ ಆವರೇಜ್. ಆನಂದ್ ಆಡಿಯೋ ಹೊರತಂದಿರುವ ಆಲ್ಬಮ್‌ನ ಮೊದಲಪುಟ ಆಕರ್ಷಣೀಯವಾಗಿದೆ. ಸಿಡಿ ಬೆಲೆ ಕೇವಲ ರು.60.

 'Shyloo'ಶೈಲೂ Songs Free Download

 

No comments:

Post a Comment